ಮಂಜು ವರ್ಮಾ ಒಬ್ಬ ಭಾರತೀಯ ರಾಜಕಾರಣಿ ಮತ್ತು ಬಿಹಾರ ವಿಧಾನಸಭೆಯ ಮಾಜಿ ಸದಸ್ಯೆ. ಇವರು ಬಿಹಾರ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವೆಯಾಗಿದ್ದರು. == ಆರಂಭಿಕ ಜೀವನ == ವರ್ಮಾ ಕುಶ್ವಾಹ ಅಥವಾ ಕೋರಿ ಜಾತಿಗೆ ಸೇರಿದವರು. ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಅವರು ಮಧ್ಯಂತರ ಹಂತದವರೆಗೆ ಶಿಕ್ಷಣವನ್ನು ಪಡೆದಿದ್ದಾರೆ ಮತ್ತು ಅವರ ಪತಿ ಕೃಷಿಕರಾಗಿದ್ದರು. == ರಾಜಕೀಯ ವೃತ್ತಿಜೀವನ == ಮಂಜು ವರ್ಮಾ ಬೇಗುಸರಾಯ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಚೆರಿಯಾ-ಬರಿಯಾರ್‌ಪುರ ಕ್ಷೇತ್ರದಿಂದ ಎರಡು ಬಾರಿ ಶಾಸಕಿಯಾಗಿದ್ದರು. ಅವರು ಪ್ರತಿನಿಧಿಸುವ ಸ್ಥಾನವನ್ನು ಈ ಹಿಂದೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಸದಸ್ಯರಾಗಿದ್ದ ಅವರ ಮಾವ ಪ್ರತಿನಿಧಿಸಿದ್ದರು. ಆದರೆ ಅವರ ಪತಿ ಅವರು ಮೊದಲು ಸೇರಿದ್ದ ಜನತಾದಳ (ಯುನೈಟೆಡ್) ನ ನಾಯಕರೂ ಆಗಿದ್ದಾರೆ. ವರ್ಮಾ ೨೦೧೦ ಹಾಗೂ ೨೦೧೫ ರಲ್ಲಿ ಶಾಸಕಿಯಾಗಿದ್ದರು. ೨೦೧೫ ರಲ್ಲಿ, ನಿತೀಶ್ ಕುಮಾರ್ ಅವರ ಕ್ಯಾಬಿನೆಟ್‌ನ ಏಕೈಕ ಮಹಿಳಾ ಸದಸ್ಯೆ ಆಗಿದ್ದರು. ಅಲ್ಲಿ ಅವರಿಗೆ ಸಾಮಾಜಿಕ ನ್ಯಾಯ ಸಚಿವಾಲಯದ ಖಾತೆಯನ್ನು ನೀಡಲಾಗಿತ್ತು. ವರ್ಮಾ ಅವರು ಭಾಗಿಯಾಗಿದ್ದಾರೆ ಎನ್ನಲಾದ ಕುಖ್ಯಾತ ಮುಜಾಫರ್‌ಪುರ ಆಶ್ರಯ ಪ್ರಕರಣದ ನಂತರ ಅವರು ಜೆಡಿಯುನಿಂದ ಹೊರಹಾಕಲ್ಪಟ್ಟರು. ಅಪ್ರಾಪ್ತ ಬಾಲಕಿಯರನ್ನು ಇರಿಸಲಾಗಿದ್ದ ಶೆಲ್ಟರ್ ಹೋಮ್ ನಿರ್ವಹಣೆ ಆವರ ಉಸ್ತುವಾರಿಯಲ್ಲಿತ್ತು. ನಂತರ, ನಿರ್ಗತಿಕ ಅಪ್ರಾಪ್ತ ಬಾಲಕಿಯರ ವಿರುದ್ಧ ಲೈಂಗಿಕ ದೌರ್ಜನ್ಯವನ್ನು ಒಳಗೊಂಡಿರುವ "ಆಶ್ರಯ ಪ್ರಕರಣ" ಕ್ಕೆ ಸಂಬಂಧಿಸಿದಂತೆ ಅವರ ಪೂರ್ವಜರ ಮನೆಯ ಮೇಲೆ ಸಿಬಿಐ ದಾಳಿ ನಡೆದಾಗ ಅವರು ಮತ್ತು ಅವರ ಪತಿಯ ವಿರುದ್ಧ "ಶಸ್ತ್ರಾಸ್ತ್ರ ಕಾಯ್ದೆ" ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಯಿತು. ಪ್ರಕರಣ ದಾಖಲಾದ ನಂತರ ಪೊಲೀಸರು ಅವರನ್ನು ಬಂಧಿಸುವಲ್ಲಿ ವಿಫಲರಾದರು ಮತ್ತು ಆಶ್ರಯ ಮನೆ ಮಾಲೀಕ ಬ್ರಜೇಶ್ ಠಾಕೂರ್ ಅವರನ್ನು ಬಂಧಿಸಲಾಯಿತು. ಮೂರು ತಿಂಗಳ ನಂತರ, ಅವರು ನ್ಯಾಯಾಲಯಕ್ಕೆ ಶರಣಾದರು ಮತ್ತು ಜೆಡಿಯು ಮತ್ತು ನಿತೀಶ್ ಕುಮಾರ್ ತನ್ನನ್ನು ಗುರಿಯಾಗಿಸಿದ್ದಾರೆ ಎಂದು ಆರೋಪಿಸಿದರು. ಮಾರ್ಚ್ ೨೦೧೯ ರಲ್ಲಿ, ಪಾಟ್ನಾ ಹೈಕೋರ್ಟ್ ಎರಡೂ ಪ್ರಕರಣಗಳಲ್ಲಿ ಜಾಮೀನು ನೀಡಿತು ಮತ್ತು ಆಕೆಯ ಪತಿ ಜೈಲಿನಲ್ಲಿಯೇ ಇದ್ದಾರೆ . ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ಮಾ ಅವರು ಸಮಾಜ ಕಲ್ಯಾಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ನಿತೀಶ್ ಅವರ ೬ ನೇ ಸಂಪುಟದಲ್ಲಿ ಶಿಕ್ಷಣ ಸಚಿವ ಕೃಷ್ಣ ನಂದನ್ ವರ್ಮಾ ಅವರಿಗೆ ಸಮಾಜ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಉಸ್ತುವಾರಿಯನ್ನು ನೀಡಲಾಯಿತು. ತನ್ನ ಜಾತಿಯ ಕಾರಣಕ್ಕಾಗಿ ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಮಂಜು ವರ್ಮಾ ತನ್ನ ವಿಚಾರಣೆಯ ಸಮಯದಲ್ಲಿ ಹೇಳಿಕೊಂಡಿದ್ದರು, ಹೀಗಾಗಿ ಕೃಷ್ಣ ನಂದನ್ ವರ್ಮಾಗೆ ತನ್ನ ಸಚಿವಾಲಯವನ್ನು ಹಂಚಿಕೆ ಮಾಡುವುದನ್ನು ಜೆಡಿಯು ನಾಯಕತ್ವವು ಮಿತವಾದ ಪ್ರಯತ್ನವೆಂದು ಪರಿಗಣಿಸಿದೆ. ೨೦೧೮ ರಲ್ಲಿ, ದಿ ಟೆಲಿಗ್ರಾಫ್‌ಗೆ ನೀಡಿದ ಸಂದರ್ಶನದಲ್ಲಿ, ವರ್ಮಾ ತನ್ನ ಪತಿ ಮುಗ್ಧ ಎಂದು ಹೇಳಿಕೊಂಡಿದ್ದರು. ಅವರ ಪ್ರಕಾರ, ಕಾರ್ಯಕ್ರಮದ ಸಂದರ್ಭದಲ್ಲಿ ಹುಡುಗಿಯರು ತಮ್ಮ ಕೊಳಕು ಬಟ್ಟೆಯಲ್ಲಿ ಅಡುಗೆ ಮಾಡುವುದನ್ನು ನೋಡಿದಾಗ ಅವರು ತಮ್ಮ ಪತಿಯೊಂದಿಗೆ ಒಮ್ಮೆ ಮಾತ್ರ ಆಶ್ರಯ ಮನೆಗೆ ಭೇಟಿ ನೀಡಿದ್ದರು, ಆದರೆ ಅವರು ವಿಚಾರಣೆಯಲ್ಲಿ ಏನನ್ನೂ ಹೇಳಲು ನಿರಾಕರಿಸಿದರು. ೨೦೨೦ ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ, ಮುಜಾಫರ್‌ಪುರ ಶೆಲ್ಟರ್ ಹೋಮ್ ಪ್ರಕರಣದಲ್ಲಿ ತಮ್ಮ ಪತಿ ಭಾಗಿಯಾಗಿರುವ ಆರೋಪದ ಪ್ರಕರಣಗಳ ನಂತರ ವರ್ಮಾ ಈ ಹಿಂದೆ ರಾಜೀನಾಮೆ ನೀಡಿದ್ದ ಜನತಾ ದಳ (ಯುನೈಟೆಡ್) ಪಕ್ಷವು ಅವರನ್ನು ಮತ್ತೆ ಚೆರಿಯಾ-ಬರಿಯಾರ್‌ಪುರ ಕ್ಷೇತ್ರದಿಂದ ಬಿಹಾರ ವಿಧಾನಸಭೆಗೆ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿತು. ವರ್ಮಾ ಅವರು ಈ ಚುನಾವಣೆಯಲ್ಲಿ ಮಾಜಿ ಸಂಸದರಾಗಿದ್ದ ರಾಷ್ಟ್ರೀಯ ಜನತಾ ದಳದ ರಾಜ್ ಬನ್ಶಿ ಮಹ್ತೋ ಅವರಿಂದ ಪರಾಭವಗೊಂಡರು. == ಸಹ ನೋಡಿ == ಕುಶಾವಾಹ == ಉಲ್ಲೇಖಗಳು ==